ಕೀರ್ತನೆಗಳು 101:1-8 KBSI1970 - Bible AI

1ಕರುಣೆ ನೀತಿಗಳನ್ನು ಕುರಿತು ಹಾಡುವೆನು; ಓ ಕರ್ತನೇ, ನಿನ್ನನ್ನು ಕೀರ್ತಿ ಸುವೆನು.

2ಸಂಪೂರ್ಣವಾದ ಮಾರ್ಗದಲ್ಲಿ ಬುದ್ಧಿ ಯಿಂದ ನಡೆದು ಕೊಳ್ಳುವೆನು; ಯಾವಾಗ ನನ್ನ ಬಳಿಗೆ ಬರುವಿ? ನನ್ನ ಹೃದಯದ ಸಂಪೂರ್ಣತೆಯಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.

3ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.

4ಡೊಂಕಾದ ಹೃದಯವು ನನ್ನನ್ನು ಬಿಟ್ಟು ಹೋಗುವದು; ಕೆಟ್ಟವನನ್ನು ತಿಳಿಯು ವದಿಲ್ಲ.

5ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.

6ದೇಶದಲ್ಲಿರುವ ನಂಬಿಗಸ್ತರು ನನ್ನ ಸಂಗಡ ವಾಸಿ ಸುವ ಹಾಗೆ ನನ್ನ ಕಣ್ಣುಗಳು ಅವರ ಮೇಲೆ ಅವೆ; ಸಂಪೂರ್ಣವಾದ ಮಾರ್ಗದಲ್ಲಿ ನಡೆದು ಕೊಳ್ಳುವ ವನೇ ನನ್ನನ್ನು ಸೇವಿಸುವನು.

7ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು; ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನೆಲೆಯಾಗಿರುವದಿಲ್ಲ;ದುಷ್ಟ ತನ ಮಾಡುವವರೆಲ್ಲರನ್ನು ಕರ್ತನ ಪಟ್ಟಣದೊಳ ಗಿಂದ ಕಡಿದು ಬಿಡುವ ಹಾಗೆ ಬೆಳಿಗ್ಗೆ ದೇಶದ ದುಷ್ಟ ರೆಲ್ಲರನ್ನು ಸಂಹರಿಸುವೆನು.

8ದುಷ್ಟ ತನ ಮಾಡುವವರೆಲ್ಲರನ್ನು ಕರ್ತನ ಪಟ್ಟಣದೊಳ ಗಿಂದ ಕಡಿದು ಬಿಡುವ ಹಾಗೆ ಬೆಳಿಗ್ಗೆ ದೇಶದ ದುಷ್ಟ ರೆಲ್ಲರನ್ನು ಸಂಹರಿಸುವೆನು.

cle>